SSS

Weekly Newsletter

South Social Stage : #Bangalore
Powered by Scoop.it
Southsocial Stage's insight:
ಲೋಕಚರಿತ'ವು ಇದೇ ಶನಿವಾರ ಮತ್ತು ಭಾನುವಾರ 26 ಮತ್ತು 27 ರಂದು `ಮೈಮ್ ಕಾರ್ಯಾಗಾರ'ವನ್ನು ಎಂಇಎಸ್. ಕಿಶೋರ ಕೇಂದ್ರ, ಮಲ್ಲೇಶ್ವರದಲ್ಲಿ ನಡೆಸುತ್ತಿದೆ. ಪ್ರವೇಶ ಶುಲ್ಕ ಕೇವಲ ರೂ. 100 ಅಷ್ಟೇ. ಆಸಕ್ತರು ನಿಮ್ಮ ಹೆಸರನ್ನು ನೋಂದಾಯಿಸಲು ಸಂಪರ್ಕಿಸಬೇಕಾದ ದೂರವಾಣಿ ಸಂಖ್ಯೆಗಳು ಹೀಗಿವೆ: 9845195931 ಅಥವಾ 9742006295. ಸಮಯದ ವಿವರಗಳಿಗೆ ಫೋಸ್ಟರ್ ನೋಡಿ. ಭಾನುವಾರ ಸಂಜೆ ಶಿಬಿರಾರ್ಥಿಗಳಿಂದ `ಮೈಮ್ ಪ್ರದರ್ಶನ' ಇರುತ್ತದೆ. ತ್ವರೆಮಾಡಿ ನಿಮ್ಮ ಹೆಸರನ್ನು ನೋಂದಾಯಿಸಿ
Southsocial Stage's insight:
ಮೇಲ್ನೋಟಕ್ಕೆ ’ತುಘಲಕ್’ ಐತಿಹಾಸಿಕ ನಾಟಕವೆನ್ನಿಸಿದರೂ, ಇಂದಿಗೂ ನಾವು ಕಾಣುವ ರಾಜಕಾರಣದ ಮೇಲಿನ ಧರ್ಮದ ಹಿಡಿತವನ್ನು ಎತ್ತಿ ಹಿಡಿಯುತ್ತದೆ. ಧರ್ಮ ದ್ವೇಷದಿಂದ ಒಡೆದು ಚೂರಾದ ತನ್ನ ರಾಜ್ಯವನ್ನು ಶಾಂತಿ ಮತ್ತು ಸಾಮರಸ್ಯದ ತಳಹದಿಯ ಮೇಲೆ ಕಟ್ಟ ಬಯಸುವ ತುಘಲಕ್ ನಿಗೆ ಎದುರಾಗುವುದು, ಧರ್ಮಾಂಧರ ವಿರೋಧ ಮತ್ತು ರಾಜಕಾರಣವನ್ನು ತಮ್ಮ ಹತೋಟಿಯಲ್ಲಿರಿಸಲು ಹುನ್ನಾರ ನಡೆಸುವ ಅಂದಿನ ವ್ಯಾಪಾರಿ ವರ್ಗವಾದ ಅಮೀರರು.ಅಕ್ಟೋಬರ್ ನಲ್ಲಿ ರಂಗಶಂಕರದಲ್ಲಿ ನಡೆದ ಕಾರ್ನಾಡ ನಾಟಕಗಳ ಉತ್ಸವದಲ್ಲಿ ಎಂಟು ಭಾಷೆಗಳಿಂದ ಎಂಟು ನಾಟಕಗಳು ಪ್ರದರ್ಶಿಸಲ್ಪಟ್ಟಿದ್ದು, ’ಸಮುದಾಯ’ ಬೆಂಗಳೂರು ಕನ್ನಡದಲ್ಲಿ ’ತುಘಲಕ್’ ನಾಟಕವನ್ನು ಆಯ್ಕೆ ಮಾಡಿಕೊಂಡಿತ್ತು. ಹೊಸಕಾಲದ ರಂಗ ಸಾಧ್ಯತೆ ಮತ್ತು ಅರ್ಥದ ಅಗತ್ಯತೆಗಳ ಹಿನ್ನೆಲೆಯಲ್ಲಿ ಇದನ್ನು ಪ್ರಯೋಗಿಸಿದ ಸಮುದಾಯ, ಇದೇ ಆಗಸ್ಟ್ 1, 2014 ರಂದು ಈ ನಾಟಕದ 27 ನೇ ಪ್ರದರ್ಶನ ನೀಡಲಿದೆ.